ಸೋಮವಾರ, ಡಿಸೆಂಬರ್ 21, 2009

ಕಣ್ಣ ಹನಿಯೊನ್ದಿಗೆ ಕೆನ್ನೆ ಮಾತಾಡಿದೆ............

ಕಾಣದ ನೋವು, ಕಾರಣ ಕೇಳದೇ ನೆನಪಾಗಿದೆ
ಚೂರಾದ ಕನಸು ಕಣ್ಮುಂದೆ ನಿಂತಿದೆ,
ಹಾಳಾದ ಹೃದಯ, ಸದ್ದಿಲ್ಲದೇ ಅಳುತಿದೆ
ಕಣ್ಣ ಹನಿಯೊನ್ದಿಗೆ ಕೆನ್ನೆ ಮಾತಾಡಿದೆ............

ಹಾರುತಿದ್ದ ಹೃದಯ, ದಾರಿ ಕಾಣದೆ ನಿಂತಿದೆ,
ಗುರಿಯ ಬೆನ್ನತ್ತಿದ್ದ ಜೀವ, ಗುರುತನ್ನೇ ಮರೆತಿದೆ
ಆದರೂ ನಿನ್ನ ದಾರಿಯನ್ನೇ ಕಾಯುತಿದ್ದೆ,
ಕಣ್ಣ ಹನಿಯೊನ್ದಿಗೆ ಕೆನ್ನೆ ಮಾತಾಡಿದೆ............

ನೊಂದ ಮನಸಿಗೆ, ಮೌನವೇ ಮಾತಾಗಿದೆ,
ಬರಡು ಜೀವ, ಅಳಿಯಲಾಗದೆ ಉಳಿದಿದೆ
ನೋವಾದರೂ, ಹೇಳಲು ಬಾರದೆ
ಕಣ್ಣ ಹನಿಯೊನ್ದಿಗೆ ಕೆನ್ನೆ ಮಾತಾಡಿದೆ............


[ಪ್ರೇರಣೆ : ಮನಸಾರೆ ಚಿತ್ರದ ಹಾಡು]

4 ಕಾಮೆಂಟ್‌ಗಳು:

  1. Geleya,

    Ninna manada mathu bavukavagide.... Kavithe odi nanna haleya nenapugalu marukalisidavu mkitra...

    Nenapugalu Beku Saviyali Baduku...

    ಪ್ರತ್ಯುತ್ತರಅಳಿಸಿ
  2. ಸವಿ ನೆನಪುಗಳು ಬೇಕು ಸವಿಯಲಿ ಬದುಕು ಕಹಿ ನೆನಪೊಂದು ಸಾಕು.... ಬದುಕನ್ನು ಬರಡಾಗಿಸುಲು. ಚಿಂತೆ ಬೇಡ ಕಾಲವೆಂಬ ಮಹಾನ್ ಮಾಂತ್ರಿಕನೊಬ್ಬನಿದ್ದಾನೆ ಅಲ್ಲವೆ ; ಕಾಲವೆಂಬುದು ಎಲ್ಲ ದುಃಖಗಳಿಗೂ ಔಷಧ, ಕ್ರಮೇಣ ನೋವು ಕಡಿಮೆಯಾಗುತ್ತದೆ. ಹೇಗೆ ಸಂತೋಷವನ್ನು ಪೂರ್ತಿಯಾಗಿ ಅನುಭವಿಸಲು ಬಿಡದೆ ಇತರೆ ಸಂಗತಿಗಳು ನಮ್ಮನ್ನು distract ಮಾಡುತ್ತವೆಯೋ ಹಾಗೆಯೇ, ದುಃಖವನ್ನೂ ಈ ಬದುಕು ಪೂರ್ತಿಯಾಗಿ ಅನುಭವಿಸಲು ಬಿಡುವುದಿಲ್ಲ. ನಮಗೇ ಗೊತ್ತಿಲ್ಲದೆ ಈ ಬದುಕು ಅದೇಗೋ normal modeಗೆ ಬಂದು ಬಿಟ್ಟಿರುತ್ತದೆ.

    ಸಂಬಂಧ ಎನ್ನುವುದು ಪುಸ್ತಕ ಇದ್ದ ಹಾಗೆ. ಬರೆಯಲು ತುಂಬ ಸಮಯ ಬೇಕು. ಆದರೆ ಈ ಪುಸ್ತಕ ಸುಡಲು ಒಂದು ಕ್ಷಣ ಸಾಕು.

    ನೂರು ತಪ್ಪುಗಳನ್ನು ಮಾಡಿದರೂ ನಮ್ಮನ್ನು ನಾವು ಪ್ರೀತಿಸುತ್ತೇವೆ. ಕ್ಷಮಿಸಿಕೊಳ್ಳುತ್ತೇವೆ. ಹಾಗಿರುವಾಗ ಒಂದೇ ಒಂದು ತಪ್ಪು ಮಾಡಿದ್ರು ಎಂಬ ಕಾರಣಕ್ಕೇ ಬೇರೆಯವರನ್ನು ದ್ವೇಷಿಸುವುದು ಸರಿಯೇ ? this is a way to face reality.
    --ಅರುಣ್

    ಪ್ರತ್ಯುತ್ತರಅಳಿಸಿ