ಶುಕ್ರವಾರ, ಫೆಬ್ರವರಿ 12, 2010

ಹನಿಸಿಕೆ

ಅನಂತ ಅಲೆಗಳ ಕಡಲಿನಲಿ
ಕಾಣದ ಊರಿಗೆ ತೀರದ ಪಯಣ,
ನೀನೇ ಅಂಬಿಗ ನೀನೇ ನಾವಿಕ
ತೀರಿಸುತ ಸಾಗೋ ಜೀವದ ಋಣ.
ನೋವಿರದ ಬಾಳಿಲ್ಲ, ನಗುವಿಲ್ಲದ ನೀನು ನೀನಲ್ಲ,
ನೆಮ್ಮದಿ ಮರೆತ ಬದುಕಿಗೆ ಅರ್ಥವಿಲ್ಲ.

ಮುಂದುವರೆಯುವುದು.........

ಗುರುವಾರ, ಫೆಬ್ರವರಿ 11, 2010

ಹನಿಸಿಕೆ

ಪ್ರತಿ ರಾತ್ರಿ ಅದೇ ಕನಸು.........
ಇಂದಾದರೂ ಕಾಣುವಳಾ ನನ್ನ ಮನಸ್ಸು ?
ಅದೇ ಆಸೆಯೊಂದಿಗೆ....
ನಿದ್ದೆಗೆ ಜಾರುವೆ ಮೆಲ್ಲನೆ ಹಾಗೆ ಸುಮ್ಮನೆ

ಮುಂದುವರೆಯುವುದು.........

ಸೋಮವಾರ, ಡಿಸೆಂಬರ್ 21, 2009

ಕಣ್ಣ ಹನಿಯೊನ್ದಿಗೆ ಕೆನ್ನೆ ಮಾತಾಡಿದೆ............

ಕಾಣದ ನೋವು, ಕಾರಣ ಕೇಳದೇ ನೆನಪಾಗಿದೆ
ಚೂರಾದ ಕನಸು ಕಣ್ಮುಂದೆ ನಿಂತಿದೆ,
ಹಾಳಾದ ಹೃದಯ, ಸದ್ದಿಲ್ಲದೇ ಅಳುತಿದೆ
ಕಣ್ಣ ಹನಿಯೊನ್ದಿಗೆ ಕೆನ್ನೆ ಮಾತಾಡಿದೆ............

ಹಾರುತಿದ್ದ ಹೃದಯ, ದಾರಿ ಕಾಣದೆ ನಿಂತಿದೆ,
ಗುರಿಯ ಬೆನ್ನತ್ತಿದ್ದ ಜೀವ, ಗುರುತನ್ನೇ ಮರೆತಿದೆ
ಆದರೂ ನಿನ್ನ ದಾರಿಯನ್ನೇ ಕಾಯುತಿದ್ದೆ,
ಕಣ್ಣ ಹನಿಯೊನ್ದಿಗೆ ಕೆನ್ನೆ ಮಾತಾಡಿದೆ............

ನೊಂದ ಮನಸಿಗೆ, ಮೌನವೇ ಮಾತಾಗಿದೆ,
ಬರಡು ಜೀವ, ಅಳಿಯಲಾಗದೆ ಉಳಿದಿದೆ
ನೋವಾದರೂ, ಹೇಳಲು ಬಾರದೆ
ಕಣ್ಣ ಹನಿಯೊನ್ದಿಗೆ ಕೆನ್ನೆ ಮಾತಾಡಿದೆ............


[ಪ್ರೇರಣೆ : ಮನಸಾರೆ ಚಿತ್ರದ ಹಾಡು]